
WELCOME TO
PANCHAMASALI MATRIMONY
At Panchamasali Matrimony, we are dedicated to fostering the best matches within the community. Our platform is designed to create trust and bring together individuals who are seeking a life partner within the Panchamasali community. We understand the importance of finding a compatible and understanding life partner, and we are here to facilitate that journey for you.

ದಿನಾಂಕ 01-09-2024ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ರಾಜ್ಯ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ
ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) ರವರಿಗೆ ಹಾಗು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೊನ್ನಾಳಿಯ *ಶ್ರೀ ಪರಮೇಶ್ ಪಟ್ಟಣಶೆಟ್ಟಿ ರವರಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ
ತುಂಬುಹೃದಯದ ಅಭಿನಂದನೆಗಳು
ತಮ್ಮ ಸಾರಥ್ಯದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯು ಇನ್ನು ಹೆಚ್ಚು ಅಭಿವೃದ್ಧಿ ಹೊಂದಲೆಂದು ಈ ಮೂಲಕ ಹಾರೈಸುತ್ತೇವೆ
ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ ಮೊಟ್ಟ ಮೊದಲ ಭಾರಿಗೆ ಲೋಕಸಭಾ ಅಧ್ಯಕ್ಷರು ಶ್ರೀ ಓಂ ಪ್ರಕಾಶ ಬಿರ್ಲಾ ಪುಷ್ಪಅರ್ಪಣೆ ಮಾಡೋದರ ಮೂಲಕ ಅದ್ದೂರಿ ಆಚರಣೆಗೆ ಚಾಲನೆ ಕೊಟ್ಟರು ಈ ಸಂದರ್ಭದಲ್ಲಿ ಪಂಚಮಸಾಲಿ ಜಗದ್ಗುರು ಪೀಠದ ಪರಮ ಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ,ಶ್ರೀ ವಿ ಸೋಮಣ್ಣ ರಾಜ್ಯಸಭಾ ಸದಸ್ಯರು ಶ್ರೀ ಈರಣ್ಣ ಕಡಾಡಿ, ಶ್ರೀ ಲೆಹಾರಸಿಂಘ, ವಿಧಾನ ಸಭೆ ಸದಸ್ಯರು ಶ್ರೀ ಅರವಿಂದ ಬೆಲ್ಲದ, ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷರು ಶ್ರೀ ಸೋಮನಗೌಡ ಎಮ್ ಮಾಲಿಪಾಟೀಲ್, ಶ್ರೀಪೀಠದ ಟ್ರಸ್ಟ್ ಸದಸ್ಯರು ಶ್ರೀ ಚಂದ್ರಶೇಖರ ಪೂಜಾರ, ಯುವ ಘಟಕ ರಾಜ್ಯ ನೂತನ ಪ್ರಧಾನ ಕಾರ್ಯದರ್ಶಿ ಶ್ರೀ ಶೇಖರ ಮುತ್ತೇನವರ ಅಲ್ಲದೇ ದೆಹಲಿ ಕನ್ನಡ ಸಂಘದ 300 ಹೆಚ್ಚು ಸದಸ್ಯರು, ರೈಲ್ವೆ ಇಲಾಖೆ ನೌಕರರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದ ಈ ಕಾರ್ಯಕ್ರಮ ಐತಿಹಾಸಿಕ ಮೊಟ್ಟ ಮೊದಲ ಭಾರಿಗೆ ಅದ್ದೂರಿಯಾಗಿ ನಡೆಯಿತು,


ದಿನಾಂಕ : 06-10-2024ರಂದು ಪಂಚಮಸಾಲಿ ಸಮಾಜವನ್ನು ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು, ಧಾರ್ಮಿಕವಾಗಿ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವ ಹಿರಿಯರ ಆಶಯದಂತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತ್ಯುತ್ಸವದ ಅಂಗವಾಗಿ ಇದೇ ದಿನಾಂಕ 23 ರಿಂದ ರಾಜ್ಯದ 25 ಸಾವಿರ ಮನೆಗಳನ್ನು ಭೇಟಿ ಮಾಡುವ ಸಂಕಲ್ಪದೊAದಿಗೆ ಸಮಾಜ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗುವುದಾಗಿ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ನಡೆದ ನೂತನ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ವಚನ ಮತ್ತು ಪದಗ್ರಹಣ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಸಮಾಜವನ್ನು ಸದೃಢವಾಗಿ ಕಟ್ಟಬೇಕು. ಸಮಾಜದಲ್ಲಿನ ಬಡವರಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಬೇಕು ಎಂಬ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಪಂಚಮಸಾಲಿ ಸಮಾಜದ ಪತ್ರಿಯೊಬ್ಬರ ಮನೆಗಳಿಗೆ ಭೇಟಿ ನೀಡುವ ಮೂಲಕ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.
ಸಮಾಜವನ್ನು ಮತ್ತಷ್ಟು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ತರುವಂತಹ ಕೆಲಸವನ್ನು ಮಾಡುವೆ. ನಾವು ಪೀಠಕ್ಕೆ ಶಾಶ್ವತವಲ್ಲ, ಪೀಠ ಶಾಶ್ವತವಾಗಿ ಇರುತ್ತದೆ ಎಂಬುದನ್ನು ಮನಗಂಡು ಪೀಠದ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುವುದಾಗಿ ತಿಳಿಸಿದರು.
ರಾಜ್ಯ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಮಾತನಾಡಿ, ಪಂಚಮಸಾಲಿ ಪೀಠ ನಿರ್ದಿಷ್ಟ ಗುರಿ ಮತ್ತು ಉದ್ದೇಶ ಇಟ್ಟುಕೊಂಡು ಸಂಘಟನೆಗೆ ಮುಂದಾಗಬೇಕಿದೆ. ಸಮಾಜದಲ್ಲಿ ಬಹಳಷ್ಟು ಬಡವರಿದ್ದಾರೆ, ಪ್ರತಿಭಾವಂತ ವ್ಯಕ್ತಿಗಳಿದ್ದಾರೆ. ಅವರನ್ನು ಸನ್ಮಾನಿಸಿ, ಗೌರವ ನೀಡುವುದರ ಜೊತೆಗೆ ಗುರುತಿಸುವಂತಹ ಕೆಲಸ ಆಗಬೇಕು. ರಾಜಕೀಯವಾಗಿ ಬೆಳೆಯುವಂತಹ ಯುವಕರಿಗೆ ಪ್ರೋತ್ಸಾಹ ನೀಡಬೇಕು.
ಸಮಾಜದ ವತಿಯಿಂದ ರಾಜ್ಯಮಟ್ಟದಲ್ಲಿ ಅರ್ಬನ್ ಬ್ಯಾಂಕ್ ತೆರೆದು ಆ ಮೂಲಕ ಸಮಾಜದವರಿಗೆ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವು ಶ್ರೀ ಪೀಠದ ವತಿಯಿಂದ ಆಗುಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.














